Author Archives:

ವಿಚಾರವಾದದ ಅನುಸಂಧಾನ ಮತ್ತು ನೈಚ್ಯಾನುಸಂಧಾನ

ರಾಜ್ಯದಲ್ಲಿ ಹಲವು ಕಡೆ ಆಚರಣೆಲ್ಲಿರುವ ಕುಖ್ಯಾತ ಮಡೆಸ್ನಾನವನ್ನು ನಿಲ್ಲಿಸಬೇಕೆಂದು ಪ್ರಗತಿಪರ ಚಿಂತಕರು ಒತ್ತಾಯಿಸುತ್ತ ಬಂದಿದ್ದರೂ ಸರಕಾರ ನಿರ್ಧಾರ ಕೈಗೊಂಡಿಲ್ಲ. ಈ ಬಾರಿ ಸುಬ್ರಹ್ಮಣ್ಯದ ಮಡೆಸ್ನಾನದ ವಿರುದ್ಧ ದನಿ ಎತ್ತಿದ ಪ್ರಗತಿಪರರ ಮೇಲೆ ಪಟ್ಟಭದ್ರ ಶಕ್ತಿಗಳು ಆಕ್ರಮಣ ಮಾಡಿದಾಗಲೂ ಸರಕಾರ ಇತ್ಯಾತ್ಮಕವಾಗಿ ಸ್ಪಂದಿಸಿಲ್ಲ. ಪೇಜಾವರದ ಶ್ರೀ ವಿಶ್ವೇಶತೀರ್ಥರು ಅದು ನಂಬಿಕೆಯ ವಿಷಯವೆಂದೂ ಪರಂಪರೆಯ ಆಚರಣೆಯೆಂದೂ ಅದನ್ನು ನಿಷೇಧಿಸಲು ಮುಂದಾಗದಿದ್ದಾಗ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲರು ಮಡೆಸ್ನಾನ ಕುರಿತ ಸಂವಾದ ಏರ್ಪಡಿಸಿ ಸಮಾನ ಮನಸ್ಕ ಮಠಾಧಿಪತಿಗಳು ಮತ್ತು ವಿಚಾರವಂತರೊಂದಿಗೆ ಸಂವಾದದಲ್ಲಿ [...]

“ನೀನು ನಕ್ಕರೆ ಹಾಲು ಸಕ್ಕರೆ!’

ಕೀರ್ತಿಶ್ರೀ ನಾಯಕ ಸುಸ್ಮಿತಾ ನಮ್ಮ ಮನೆಯಲ್ಲಿ ಇರಲು ಬಂದಾಗ ನಾನು ಆರನೆಯ ತರಗತಿಯಲ್ಲಿದ್ದೆ. ಸ್ವಲ್ಪ ಜಾಸ್ತಿಯೇ ಎನಿಸುವಂತೆ ಶಿಸ್ತಿನಲ್ಲಿ ಬೆಳೆದ ನನಗೆ ಸುಸ್ಮ ಯಾವ ಅಳುಕೂ ಇಲ್ಲದೆ ತನ್ನ ಮನೋಭಾವಗಳನ್ನು ಪ್ರಕಟಿಸುತ್ತಿದ್ದ ರೀತಿ ನೋಡಿ ನನಗೆ, ನಾನು ಕೈತೋಟದ ಗಿಡವಾದರೆ ಇವಳು ಕಾಡಿನ ಗಿಡದಂತೆ ಕಾಣುತ್ತಿದ್ದಳು. ಸುಸ್ಮಿತಾ ನಮ್ಮ ಮನೆಗೆ ಬಂದ ಹೊಸದರಲ್ಲಿ ಯಾವುದೇ ಹಕ್ಕಿಯ ಕೂಗು ಕೇಳಿದರೂ ಸಾಕು, ‘ಏ ಕೀರ್ತಿ, ಇದು ಇಂಥಾ ಹಕ್ಕಿ’ ಎಂದು ಹಕ್ಕಿಯ ಹೆಸರು ಹೇಳುತ್ತಿದ್ದಳು. ಪಿಕರಾಳ, ಕಾಜಾಣ ಇತ್ಯಾದಿ [...]

ಗಂಗಾವತಿ ಸಮ್ಮೇಳನದ ಕರಪತ್ರ

ಮಾನ್ಯರೆ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮುಗಿದಿದೆ. ಸಮ್ಮೇಳನಕ್ಕಾಗಿ ಸಿದ್ಧಪಡಿಸಿ ಅಲ್ಲಿ ವಿತರಿಸಿದ ಕರಪತ್ರವನ್ನು ಇಲ್ಲಿ ಕೊಟ್ಟಿದೆ. ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ, ಕನ್ನಡ ಅಂಕಿಗಳನ್ನು ಬಳಸಿ ಎನ್ನುವ ಕರಪತ್ರವನ್ನು ಇಂದಿನವರೆಗೆ ನವೀಕರಿಸಲಾಗಿದೆ. ಮಕ್ಕಳ ಶಿಕ್ಷಣ ಹಕ್ಕಿನ ಹಕ್ಕೊತ್ತಾಯವಿರುವಂತೆ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ದುಡುಕಿನ ಬಗ್ಗೆ, ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ವಿರೋಧ ಇಲ್ಲಿವೆ. ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳಿಗೆ ಮುಕ್ತ ಸ್ವಾಗತವಿದೆ. ಕರ್ನಾಟಕದ [...]

ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ*

ಪ್ರೊ ಜಿ ಎಚ್ ನಾಯಕ ‘ಅಧ್ಯಾಪಕರ ದಿನಾಚರಣೆ : ಪರಿಕಲ್ಪನೆ, ಸ್ವರೂಪ’ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದಲ್ಲಿ ೫-೯-೨೦೦೮ರಂದು ನಾನು ವಿಶೇಷ ಉಪನ್ಯಾಸ ನೀಡಿದ್ದೆ. ನನ್ನ ಭಾಷಣದ ಪತ್ರಿಕಾವರದಿ ಓದಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರು ‘ಪ್ರೊ ನಾಯಕರ ತರ್ಕವನ್ನು ಒಪ್ಪಬಹುದಾದರೂ ಡಾ ರಾಧಾಕೃಷ್ಣನ್ ಉಪಾಧ್ಯಾಯ ವೃತ್ತಿಗೊಂದು ಮಹತ್ತ್ವವನ್ನು ಕೊಟ್ಟಿರುವುದನ್ನು ಮರೆಯಬಾರದು. ಅದು ಶಿಕ್ಷಕರ ದಿನಾಚರಣೆ. ಅಷ್ಟೇ. ಡಾ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಲ್ಲ ಎಂದು ತಿಳಿದರೆ ನಮ್ಮ ಸಮಸ್ಯೆ ಬಗೆಹರಿಯಬಹುದೆನಿಸುತ್ತದೆ’ ಎಂದಿದ್ದಾರೆ(ಪ್ರಜಾವಾಣಿ [...]

ಕನ್ನಡ ಮಾಧ್ಯಮದ ಅನಂತರ… ಒಂದು ಅನುಭವ

ಮಾಯಾ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಕನ್ನಡ ಮಾಧ್ಯಮದಲ್ಲಿ ನಾನು ೧೦ನೇ ತರಗತಿ ಮುಗಿಸಿದ ೧೦ ವರ್ಷಗಳ ಬಳಿಕ, ಸರಕಾರವು ಪ್ರಾಥಮಿಕ ಶಿಕ್ಷಣ ಮಾಧ್ಯಮದ ಬಗ್ಗೆ ಚಿಂತಿಸುತ್ತಿರುವ ಸಂದರ್ಭದಲ್ಲಿ ಈ ೧೦ ವರ್ಷಗಳ ಅನುಭವವನ್ನು ಸಮಾಜದ ಮುಂದಿಡಲು ಬಯಸುತ್ತೇನೆ. ೧೦ ವರ್ಷಗಳ ಹಿಂದೆ ಶಿಕ್ಷಣ ಮಾಧ್ಯಮದ ಬಗ್ಗೆ ಅವಲೋಕಿಸುವ ಯೋಚನಾಶಕ್ತಿ ನನ್ನ ಒಳಗಿತ್ತೆಂದು ಹೇಳಲಾಗದು. ಪದವಿಪೂರ್ವ ಹಂತವನ್ನು ಪ್ರವೇಶಿಸುವಾಗ ಇದ್ದುದು ಛಲವೊಂದೇ. ಕನ್ನಡ ಮಾಧ್ಯಮ ತೊಡಕಾಗದೆಂಬ ಧೈರ್ಯವೊಂದೇ… ಆ ಧೈರ್ಯವು ಜಗತ್ತನ್ನು ನಡೆಸುವ ಶಕ್ತಿಯ ಧನಾತ್ಮಕ ಪ್ರತಿಕ್ರಿಯೆಯೊಂದಿಗೆ [...]

ಕಬ್ಬಿಣದ ಕಡಲೆಕಾಯಿಯಾದ ಇಂಗ್ಲಿಷ್ ಮಾಧ್ಯಮ: ವಿದ್ಯಾರ್ಥಿ ಆತ್ಮಹತ್ಯೆ

ಬಂಟ್ವಾಳ, ಜು ೨೦- ವಿದ್ಯಾಭ್ಯಾಸ ಕಠಿಣವಾಗುತ್ತಿದ್ದರಿಂದ ನೊಂದುಕೊಂಡ ಹದಿಹರಯದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬಿ. ಮೂಡ ಗ್ರಾಮದ ಪಣೋಳಿಬೈಲು ಸಮೀಪದ ಬೊಳ್ಳಾಯಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಬೊಳ್ಳಾಯಿ ನಿವಾಸಿ ಕೃಷ್ಣಪ್ಪ ಕುಲಾಲ-ಹರಿಣಾಕ್ಷಿ ದಂಪತಿಗಳ ಪುತ್ರ ದೇವಿಪ್ರಸಾದ್(೧೪ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ದೇವಿಪ್ರಸಾದ್ ನನ್ನು ಪ್ರೌಢಶಾಲಾ ಶಿಕ್ಷಣಕ್ಕಾಗಿ ಆತನ ಹೆತ್ತವರು ಕುಕ್ಕಾಜೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಅವರ ಉದ್ದೇಶ ಒಳ್ಳೆಯದೇ ಇತ್ತಾದರೂ ಕನ್ನಡ [...]

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ

ಮಾನ್ಯರೆ, ನಮಸ್ಕಾರ. ಕುಮಾರವ್ಯಾಸ ಭಾರತದ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ. ಇದರ ಬೆಲೆ ರೂ ೮೦೦. ಕೋರಿಯರ್ ವೆಚ್ಚ ರೂ ೫೦ (ಒಟ್ಟು ರೂ ೮೫೦) ಈ ಮೊಬಲಗನ್ನು ಕನ್ನಡ ಗಣಕ ಪರಿಷತ್ತಿಗೆ ಮನಿ ಆರ್ಡರ್, ಚೆಕ್, ಡಿಡಿ ಮೂಲಕ (ಕನ್ನಡ ಗಣಕ ಪರಿಷತ್ತು ಬೆಂಗಳೂರು ಈ ಹೆಸರಲ್ಲಿ ತೆಗೆಯಬೇಕು) ಕಳುಹಿಸಿದರೆ. ಕೋರಿಯರ್ ಮೂಲಕ ಕಳುಹಿಸಲಾಗುವುದು. ಬ್ಯಾಂಕ್ ನಿಂದ ನೇರ ವರ್ಗಾಯಿಸುವವರಿಗೆ ಮಾಹಿತಿ: ಕನ್ನಡ ಗಣಕ ಪರಿಷತ್ತು, ಭಾರತೀಯ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ೧೦೩೦೯೧೧೨೭೦೨ [...]

೬ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆ ದುಡುಕುವುದು ಬೇಡ

ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು, ನ್ಯಾಯಾಲಯಗಳ ಅಭಿಪ್ರಾಯಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರ ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ ಶಿಕ್ಷಣ ಮಾಧ್ಯಮ. ಒಂದು ಮತ್ತು ಎರಡನೆಯ ತರಗತಿಗಳಲ್ಲಿ ಮಾತೃಭಾಷೆ ಅಥವಾ ಪರಿಸರಭಾಷೆ/ರಾಜ್ಯಭಾಷೆಗಳಲ್ಲಿ ಒಂದು ಭಾಷೆ ಮಾತ್ರ ಕಲಿಕೆಯ ವಿಷಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ [...]

ಓದುವ ಸುಖ

ಸುಖಗಳಲ್ಲಿ ಓದುವ ಸುಖಕ್ಕೆ ನಾನು ಮೊದಲನೆಯ ಸ್ಥಾನ ಕೊಡುತ್ತೇನೆ. ಅದರಲ್ಲಿಯೂ ಒಬ್ಬರೇ ಪ್ರಯಾಣ ಮಾಡುವಾಗ ನಮಗೆ ಆಪ್ತಸಂಗಾತಿಯಾಗುವುದು ಪತ್ರಿಕೆ ಅಥವಾ ಪುಸ್ತಕವೇ. ಪ್ರಯಾಣದಲ್ಲಿ ಕೈಯಲ್ಲಿರುವ ಪತ್ರಿಕೆ ನಿಮಗೆ ಅಪರಿಚಿತರನ್ನು ಪರಿಚಿತರನ್ನಾಗಿಸಬಹುದು. ಕೈಯಲ್ಲಿ ಪುಸ್ತಕವಿದ್ದರೆ ಯಾರೂ ನಿಮ್ಮ ಓದಿಗೆ ಅಡ್ಡಿಪಡಿಸದಿರಬಹುದು. ಮೊದಲೇ ಯೋಚಿಸಿದ್ದರೆ ಪ್ರಯಾಣದಲ್ಲಿ ಓದಿಗೆ ಅಗತ್ಯವಾದ ಅನುಕೂಲಗಳನ್ನು ಹೊಂದಿಸಿಕೊಳ್ಳಬಹುದು. ಓದುವ ಸುಖಕ್ಕೆ ಬಸ್ಸಿಗಿಂತ ರೈಲು ಉತ್ತಮ. ರೈಲು ಹೊರಡುವುದಕ್ಕೆ ಸ್ವಲ್ಪ ಮುಂಚಿತವಾಗಿ ನೀವು ಬೋಗಿಯನ್ನು ತಲುಪಲು ಸಾಧ್ಯವಾದರೆ ಗಾಳಿ ಬೆಳಕಿನ ಅನುಕೂಲವಿರುವ ಕಿಟಕಿಯ ಪಕ್ಕದ ಸ್ಥಾನ ನಿಮಗೆ [...]

ಸೈಕಲ್ ಯಾನ

ವೇಗ ಇಂದಿನ ಜನಜೀವನದ ಮುಖ್ಯ ಲಕ್ಷಣ. ಎಲ್ಲರೂ ಸ್ವಂತ ವಾಹನಗಳನ್ನು ಬಳಸಿ ಸಮಯಕ್ಕೆ ಸರಿಯಾಗಿ ತಾವು ತಲುಪಬೇಕಾದ ಸ್ಥಳದಲ್ಲಿರಲು ಬಯಸುತ್ತಾರೆ. ಇದರ ಪರಿಣಾಮವಾಗಿ ಇಂದಿನ ರಸ್ತೆಗಳು ವಾಹನಗಳಿಂದ ಗಿಜಿಗುಡುತ್ತಿವೆ. ಅದರಿಂದ ಎಷ್ಟೊ ವೇಳೆ ಸ್ವಂತ ವಾಹನದಲ್ಲಿ ಹೋಗುವ ಬದಲು ಸಾರ್ವಜನಿಕ ವಾಹನಗಳಲ್ಲಿ ಹೋಗಿದ್ದರೆ ಸಮಯಕ್ಕೆ ಸರಿಯಾಗಿ ತಲುಪಬಹುದಿತ್ತು ಎಂದೂ ಅನಿಸುವುದುಂಟು. ಆದರೂ ವೈಯಕ್ತಿಕ ಬಳಕೆಗೆ ಸೈಕಲ್ ಉಪಯುಕ್ತವಾದ ಎರಡು ಚಕ್ರಗಳ ವಾಹನ. ಅದಕ್ಕೆ ಎರಡು ಚಕ್ರಗಳಿರುವುದರಿಂದ ಆ ಹೆಸರು. ಎರಡು ಚಕ್ರಗಳ ವಾಹನವನ್ನು ಇಂಗ್ಲಿಷಿನಲ್ಲಿ ಬೈ-ಸೈಕಲ್ ಎನ್ನುತ್ತಾರೆ. [...]

Follow

Get every new post delivered to your Inbox.