Category Archives: ಈಗ

ಈಗ ಚರ್ಚೆಯಾಗುತ್ತಿರುವ ವಿಷಯಗಳು

ಗೋಹತ್ಯೆ ನಿಷೇಧ ಮತ್ತು ಸಾವರಕರ್

ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಿ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆದು ಮತ್ತೆ ಮಂಡಿಸಿದೆ. ಮತಧರ್ಮನಿರಪೇಕ್ಷ ಸಂವಿಧಾನವನ್ನು ಒಪ್ಪಿರುವ ನಾವು ಗೋಹತ್ಯೆಯಂಥ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯವನ್ನು ವೈಚಾರಿಕ ನಿಕಷಕ್ಕೆ ಒಡ್ಡಬೇಕು. ಈ ನಿಟ್ಟಿನಲ್ಲಿ ಹಿಂದೂರಾಷ್ಟ್ರ ಪ್ರತಿಪಾದಕರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರ ಗೋವಿನ ಕುರಿತ ವಿಚಾರಗಳು ಗಮನಾರ್ಹ (`ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’ ಮಹಾರಾಷ್ಟ್ರ ಶಾರದಾ, ಏಪ್ರಿಲ್ ೧೯೩೫): “…ಹಸು ಎತ್ತುಗಳನ್ನು [...]

ನಮಸ್ಕಾರ

ಮಾನ್ಯರೆ, ಹನ್ನೆರಡು ವರ್ಷಗಳ ಹಿಂದೆ ಪ್ರತಿ ತಿಂಗಳು ಜಿಯೊಸಿಟಿಸ್.ಕಾಂ ತಾಣದಲ್ಲಿ ಪಂಡಿತ ಪುಟವನ್ನು ಪ್ರಕಟಿಸುತ್ತಿದ್ದೆ.. ಕಾರಣಾಂತರಗಳಿಂದ ಪಂಡಿತ ಪುಟದ ಪ್ರಕಟಣೆ ನಿಂತುಹೋಗಿತ್ತು. ಈಗ ಅದನ್ನು ಜಾಲ ಚರಿಯಾಗಿ ಪ್ರಕಟಿಸುತ್ತಿದ್ದೇನೆ. ನೀವು ಮುಕ್ತವಾಗಿ ಪ್ರತಿಕ್ರಿಯಿಸಬೇಕೆಂದು ಕೋರುತ್ತೇನೆ. ಪ್ರೀತಿಯಿಂದ ಪಂಡಿತಾರಾಧ್ಯ

Follow

Get every new post delivered to your Inbox.