ಬಂಟ್ವಾಳ, ಜು ೨೦- ವಿದ್ಯಾಭ್ಯಾಸ ಕಠಿಣವಾಗುತ್ತಿದ್ದರಿಂದ ನೊಂದುಕೊಂಡ ಹದಿಹರಯದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬಿ. ಮೂಡ ಗ್ರಾಮದ ಪಣೋಳಿಬೈಲು ಸಮೀಪದ ಬೊಳ್ಳಾಯಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.
ಬೊಳ್ಳಾಯಿ ನಿವಾಸಿ ಕೃಷ್ಣಪ್ಪ ಕುಲಾಲ-ಹರಿಣಾಕ್ಷಿ ದಂಪತಿಗಳ ಪುತ್ರ ದೇವಿಪ್ರಸಾದ್(೧೪ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ದೇವಿಪ್ರಸಾದ್ ನನ್ನು ಪ್ರೌಢಶಾಲಾ ಶಿಕ್ಷಣಕ್ಕಾಗಿ ಆತನ ಹೆತ್ತವರು ಕುಕ್ಕಾಜೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಅವರ ಉದ್ದೇಶ ಒಳ್ಳೆಯದೇ ಇತ್ತಾದರೂ ಕನ್ನಡ ಮಾಧ್ಯಮದಿಂದ ದಿಢೀರ್ ಆಗಿ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಂಡಿದ್ದರಿಂದ ದೇವಿಪ್ರಸಾದ್ ಗೆ ಶಾಲೆಯಲ್ಲಿ ಕಲಿಸಿದ್ದು ತಲೆಗೆ ಹೋಗುತ್ತಿರಲಿಲ್ಲ. ಹೀಗಾಗಿ ತಾನು ಶಾಲೆಗೆ ಹೋಗುವುದಿಲ್ಲ ಎಂದು ಆಗಾಗ್ಗೆ ಹೇಳುತ್ತಿದ್ದ ಎನ್ನಲಾಗಿದೆ.
ನಿನ್ನೆ ಸಂಜೆ ೫.೩೦ರ ಸುಮಾರಿಗೆ ಶಾಲೆಯಿಂದ ಮರಳಿ ಬಂದಿದ್ದು, ಹರಿಣಾಕ್ಷಿ ಆತನಿಗೆ ಚಹಾ ನೀಡಿ ಸಮೀಪದಲ್ಲೇ ಇರುವ ತಮ್ಮ ಅಂಗಡಿಗೆ ತೆರಳಿದ್ದರು. ಕೃಷ್ಣಪ್ಪ ಕುಲಾಲ್ ಸಾಮಾನುಗಳನ್ನು ತರಲು ಪಾಣೆಮಂಗಳೂರಿಗೆ ಹೋಗಿದ್ದರು. ದೇವಿಪ್ರಸಾದ್ ನ ತಂಗಿ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭ ಸಾಧಿಸಿದ ದೇವಿಪ್ರಸಾದ್ ಕಿಟಕಿಯ ಸರಳಿಗೆ ತಂದೆಯ ಲುಂಗಿಯಿಂದ
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂಜೆ ೬.೩೦ರ ಸುಮಾರಿಗೆ ಹರಿಣಾಕ್ಷಿ ಮರಳಿ ಬಂದಾಗ ಈ ದುರಂತ ಬೆಳಕಿಗೆ ಬಂದಿದೆ.
ಈ ಬಗ್ಗೆ ಕೃಷ್ಣಪ್ಪ ಕುಲಾಲ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ
ಬಂಟ್ವಾಳ ನಗರ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಜೆವಾಣಿ ಮಂಗಳೂರು ೨೦-೭-೨೦೧೧
ಪ್ರಿಯರೆ,
ಶಿಕ್ಷಣ ಮಾಧ್ಯಮವನ್ನು ಕುರಿತ ಮೇಲ್ಮನವಿ ಸರ್ವೋನ್ನತ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಬೇಕಿರುವಾಗಲೇ ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಚಿ ಶ್ರೀ ವಿಶ್ವೇಶ್ವರ ಕಾಗೇರಿಯವರು ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಆತುರದಲ್ಲಿರುವುದು ಆತಂಕದ ಸಂಗತಿ.
ಚೆನ್ನಾಗಿ ಕಲಿಯದ ಭಾಷೆಯನ್ನು ಮಾಧ್ಯಮವಾಗಿ ಬಳಸುವುದರ ಪರಿಣಾಮಕ್ಕೆ ಇತ್ತೀಚಿನ ನಿದರ್ಶನ ಮಂಗಳೂರು ಸಮೀಪದ ಬೊಳ್ಳಾಯಿಯಲ್ಲಿ ನಡೆದಿದೆ. ಮನೆ, ಶಾಲೆ ಎಲ್ಲಿಯೂ ಪರಿಸರದ ಭಾಷೆಯಲ್ಲದ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಒತ್ತಾಯಿಸಿದರೆ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಕ್ಕೆ ದೇವಿಪ್ರಸಾದ್ ಬಲಿಯಾಗಿದ್ದಾನೆ. ಎಲ್ಲ ಮಕ್ಕಳೂ ದೇವಿ ಪ್ರಸಾದನಂತೆ ಆತ್ಮಹತ್ಯೆ ಮಾಡಿಕೊಳ್ಳದಿರಬಹುದು. ಆದರೆ ಅವರಲ್ಲಿ ಹಲವರು ಮಧ್ಯದಲ್ಲಿಯೇ ಶಾಲೆ ತೊರೆಯುವ ಸಾಧ್ಯತೆ ಹೆಚ್ಚಿದೆ.
ಇಂಗ್ಲಿಷನ್ನು ಕಲಿಯುವುದಕ್ಕೂ ಅದನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದಕ್ಕೂ ತುಂಬ ವ್ಯತ್ಯಾಸವಿದೆ. ಮಕ್ಕಳನ್ನು ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರು ಅದನ್ನು ಅರ್ಥಮಾಡಿಕೊಂಡು ಇಂಗ್ಲಿಷಿನಲ್ಲಿಯೇ ಉತ್ತರಿಸುವಂತೆ ಒಂದು ಭಾಷೆಯಾಗಿ ಇಂಗ್ಲಿಷನ್ನು ಚೆನ್ನಾಗಿ ಕಲಿಸಬೇಕು. ಅನಂತರ ಮಾತ್ರವೇ ಇಂಗ್ಲಿಷಿನಲ್ಲಿ ಓದು, ಬರವಣಿಗೆಗಳನ್ನು ಕಲಿಸುವುದು ಉಪಯುಕ್ತವಾಗುತ್ತದೆ. ಅಲ್ಲಿಯವರೆಗೆ ಮಕ್ಕಳು ಎಲ್ಲ ವಿಷಯಗಳನ್ನು ತಮ್ಮ ಮಾತೃಭಾಷೆ, ಪರಿಸರ ಭಾಷೆಯಲ್ಲಿ ಕಲಿತು ನಿಜವಾದ ಅರ್ಥದ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ.
ಮಕ್ಕಳ ವಿದ್ಯೆ ಹಕ್ಕಿನ ರಕ್ಷಕನಾಗಿ ಪಾತ್ರವಹಿಸಬೇಕಾದ ಸರಕಾರವೇ ಮಕ್ಕಳು ಅಸಹಾಯಕರಾಗಿ ಸಾವಿಗೆ ಶರಣಾಗಲು ಕಾರಣವಾಗಿರುವುದು ಅತ್ಯಂತ ಆತಂಕದ ಸಂಗತಿ. ಮಕ್ಕಳ ಹಕ್ಕನ್ನು ಸರಕಾರವಾಗಲಿ, ತಂದೆತಾಯಿಗಳಾಗಲಿ , ಶಾಲಾವರ್ತಕರಾಗಲಿ ಕಸಿದುಕೊಳ್ಳದಂತೆ ಎಲ್ಲ ಪ್ರಜ್ಞಾವಂತರೂ ದನಿ ಎತ್ತಬೇಕಿದೆ. ಬಾಳಿ ಬದುಕಬೇಕಾದ ಬಾಲಕ ದೇವಿಪ್ರಸಾದ್ ನ ದುರಂತವೇ ಈ ನಿಟ್ಟಿನಲ್ಲಿ ಕೊನೆಯದಾಗಲಿ.
ನಿಮ್ಮ ಕ್ರಿಯಾತ್ಮಕ ಪ್ರತಿಕ್ರಿಯೆಗೆ ಸ್ವಾಗತವಿದೆ.
ಪ್ರೀತಿಯಿಂದ
ಪಂಡಿತಾರಾಧ್ಯ
ಟಿಪ್ಪಣಿಗಳು
ಪ್ರಿಯ ಪಂಡಿತಾರಾಧರೇ,
ತಾವು ನೀಡಿದ ಮಾಹಿತಿ ಆಘಾತಕಾರಿಯಾಗಿದೆ. ಇಂಗ್ಲೀಷ್ ಭಾಷೆಯನ್ನು ಕಲಿಯಲಾಗದ್ದಕ್ಕೆ ಒಬ್ಬ ವಿದ್ಯಾರ್ಥಿಯ ಜೀವಹಾನಿಯಾದದ್ದು ಬಹಳ ವಿಷಾದನೀಯ. ಇದು ಸತ್ಯವೇ ಎನ್ನುವುದನ್ನು ನಾನು ಖಾತ್ರಿಮಾಡಿಕೊಳ್ಳಬಯಸುತ್ತೇನೆ.
ಅದು ಹೇಗೂ ಇರಲಿ. ನಾನು ಈಗ ನಾಲ್ಕುವರ್ಷಗಳ ಹಿಂದೆಯೇ ಒಂದು ಕಡೆಗೆ ಬರೆದಿದ್ದೇನೆ. -ಬದುಕ ಬೇಕಾದವರು ಯಾರು? ಕನ್ನಡಿಗರೋ? ಕನ್ನಡವೋ? ಕನ್ನಡಿಗರಿಗೆ ಬದುಕು ಇಲ್ಲವೆಂದಾದರೆ ಕನ್ನಡದಿಂದ ಏನು ಪ್ರಯೋಜನ? ಹೀಗಾಗಿ ಭಾಷಾಮಾಧ್ಯಮದ ಬಗ್ಗೆ ಒಂದು ಸ್ಪಷ್ಟ ನಿರ್ಣಯ ತೆಗೆದುಕೊಳ್ಳೂವುದಕ್ಕೆ ಇದು ಸಕಾಲ.
ಅನ್ನಕೊಡು ಭಾಷೆಯನ್ನು ಹರಾಜಿಗೆ ಇಟ್ಟು, ದುಡ್ಡಿದ್ದವರ ಮಕ್ಕಳಿಗೆ ಅದನ್ನು ದಕ್ಕುವಂತೆ ಮಾಡಿ, ಬಡ ಬೋರೇಗೌಡನ ಮಗನಿಗೆ ಚಿಕನಾಯ್ಕನಹಳ್ಳಿ ಚಿಪ್ಪೇಗತಿ ಎಂಬ ಪರಿಸ್ಥಿತಿ ಸೃಷ್ಟಿಯಾದ ಈ ಸನ್ನಿವೇಶದಲ್ಲಿ ಸರಕಾರವು ಎಲ್ಲರಿಗೂ ಇಂಗ್ಲೀಶನ್ನು ಕಲಿಸಲು ಕ್ರಮ ತೆಗೆದುಕೊಂಡರೆ ನನಗೆ ಏನೂ ಅಸಮಾಧಾನವಿಲ್ಲ.
ಎಲ್ಲಿಯೂ ಇಂಗ್ಲೀಷ ವಾತಾವರಣೇ ಇಲ್ಲ ಎಂದು ಬರೆದಿದ್ದೀರಿ. ನನಗೆ ನಗು ಬಂದಿತು. ಕಳೆದವಾರ, ಬೆಂಗಳೂರಿನ ಒಂದು ಆಧುನಿಕ ವಿಲೇಜಿನಲ್ಲಿ ಕಳೆದೆ. ನಾನು ಇದ್ದದ್ದು ಹನ್ನೆರಡಂತಸ್ತಿನ ಕಟ್ಟಡದ ಆರನೇ ಅಂತಸ್ತಿನಲ್ಲಿ ಅದಕ್ಕೆ ಬಾಡಿಗೆ ಕೇವಲ ಇಪ್ಪತ್ತೈದು ಸಾವಿರ – ತಿಂಗಳಿಗೆ!. ಡಜನಗಟಲೆ ಇಂತಹ ಬಹುಮಹಡಿಕಟ್ಟಡಗಳ ಸಮುಚ್ಚಯದ ಅಂಗಳದಲ್ಲಿ, ಎರಡು ಎಳೆಮಕ್ಕಳು ಆಡುತ್ತಿದ್ದರು. ಒಬ್ಬರಿಗೆ ಹೆಚ್ಚು ಅಂದ್ರೆ ನಾಲ್ಕುವರ್ಷ ಇರಬಹುದು ಇನ್ನೊಬ್ಬಳಿಗೆ ಐದುವರ್ಷದಾಟಿಲ್ಲ. ಇಬ್ಬರೂ ಸ್ಪುಟವಾದ ಸ್ವಚ್ಚವಾದ ತೊದಲದ ಇಂಗ್ಲೀಷ ಭಾಷೆಯನ್ನು ಹರಟುತ್ತಿದ್ದರು! ನಾಳೆ, ಅವರು ಕನ್ನಡಿಗರ ಅನ್ನವನ್ನು ಕದಿಯುವುದಿಲ್ಲ ಎನ್ನುವುದನ್ನು ನಂಬುವುದು ಹೇಗೆ? (ವಿ-ಅಂಚೆಯಲ್ಲಿ)
ಮಿತ್ರರೆ,
ದಕ್ಷಿಣ ಕನ್ನಡದಲ್ಲಿ ಮನೆಮಾತು ಕನ್ನಡ ಇರುವವರು ೧೦% ಇಲ್ಲ. ಇಂಥ ಪರಿಸ್ಥಿತಿಯಲ್ಲೇನು ಮಾಡಬೇಕು ಹೇಳಿ?
ಪ್ರೊ. ನರೇಂದ್ರ ನಾಯಕ (ವಿ-ಅಂಚೆಯಲ್ಲಿ)
ನರೇಂದ್ರ ನಾಯಕ್ ರವರೆ,
ಅಂತಹವರಿಗೆ ( ಕನ್ನಡ ತಾಯ್ನುಡಿ ಅಲ್ಲದವರಿಗೆ) ಅವರವರ ತಾಯ್ನುಡಿಯ ಜೊತೆಜೊತೆಗೆ( ಅಂದರೆ ತುಳು, ಬ್ಯಾರಿ, ಕೊಂಕಣಿ, ಕೊಡವ) ಇವುಗಳ ಜೊತೆ ಕರ್ನಾಟಕದ ಪರಿಸರದ ಮತ್ತು ಹೆಚ್ಚಿನವರ ನುಡಿಯಾದ
ಕನ್ನಡವನ್ನು ಕಲಿಸಬೇಕು. ಈ ರೀತಿ ಮುಂದುವರೆದ ನಾಡುಗಳಾದ ಫಿನ್-ಲ್ಯಾಂಡಿನಲ್ಲಿ ಈಗಾಗಲೆ ಮಾಡಲಾಗುತ್ತಿದೆ.
ಇಲ್ಲಿ ನೋಡಿ.:
The Hechinger Report: How does Finland incorporate immigrants and minorities into its educational system?
Virkkunen: We haven’t had so many immigrants in Finland, but we are going to have more in the future—and we need more because we have an aging population. In some schools, in the areas around Helsinki, more than 30 percent of the pupils are immigrants. It seems that we have been doing good work, also with the immigrants, if we look at PISA results. Normally, if children come from a very different schooling system or society, they have one year in a smaller setting where they study Finnish and maybe some other subjects. We try to raise their level before they come to regular classrooms. We think also that learning one’s mother tongue is very important, and that’s why we try to teach the mother tongue for all immigrants as well. It’s very challenging. I think in Helsinki, they are teaching 44 different mother tongues. The government pays for two-hour lessons each week for these pupils. We think it is very important to know your own tongue—that you can write and read and think in it. Then it’s easier also to learn other languages like Finnish or English, or other subjects.
ಇಂತೀ,
ಭರತ್ (ವಿ-ಅಂಚೆಯಲ್ಲಿ)
ಮಾನ್ಯ ಈಶ್ವರ ಶಾಸ್ತ್ರಿಯವರೆ,
ಇಂದಿಗೂ ಕನ್ನಡದ ಪರಿಸರ ನುಡಿಯೇ ಯಾಕಂದರೆ ಇಂದಿಗೂ ೨೦೧೧ರ ಸೆನ್ಸಸ್ (http://censusindia.gov.in) ಪ್ರಕಾರ ಕರ್ನಾಟಕದಲ್ಲಿ ಕನ್ನಡವನ್ನಾಡುವ ಇಲ್ಲವೆ ಕನ್ನಡವನ್ನು ತಾಯ್ನುಡಿಯಾಗಿರುವವರೇ ಬಹುಸಂಖ್ಯಾತರು. ನೀವು ಅಲ್ಲೂಂದು ಇಲ್ಲೊಂದು ಉದಾಹರಣೆಗಳನ್ನು ಇಲ್ಲವೆ ಬರೀ ಬೆಂಗಳೂರನ್ನು ಗಮನದಲ್ಲಿಟ್ಟಿಕೊಂಡು ಮಾತಾಡಿರುತ್ತಿರುವರೆಂದು ನನ್ನ ಭಾವನೆ. ಬೆಂಗಳೂರಿನಲ್ಲೇ ಇರುವ ತರಕಾರಿ ಮಾರುವವರು, ಆಟೊ ಓಡಿಸುವವರು ಅಲ್ಲದೆ ಪೊಲೀಸರು ಇವರೆಲ್ಲ ದಿನಾಲು ಕನ್ನಡದಲ್ಲೇ ಮಾತಾಡೋದು. ಇಂದಿಗೂ ಕರ್ನಾಟಕವೆಂಬ ರಾಜ್ಯವಿರುವುದು ’ಕನ್ನಡ’ ಆಡುವ ಜನರ ರಾಜ್ಯ ಎಂಬ ಮಾನ್ಯತೆಯಿಂದಲೆ (ಭಾಷಾಧಾರಿತ ರಾಜ್ಯ ವಿಂಗಡಣೆ ಆದಾಗಿನಿಂದ). ಕನ್ನಡ ಗೊತ್ತಿಲ್ಲದಿದ್ದರೆ ಕರ್ನಾಟದಲ್ಲಿ ಬಾಳುವುದು ಇಂದಿಗೂ ಕಶ್ಟ. ಹಾಗಾಗಿ ಕನ್ನಡವೇ ಕರ್ನಾಟಕದ ಪರಿಸರದ ನುಡಿ ಅಂತ ಧಾರಾಳವಾಗಿ ಹೇಳಬಹುದು.
-ನಲ್ಮೆ,
-ಭರತ್.
ಭರತಕುಮಾರರೇ,
ಇವುಗಳ ಜೊತೆ ಕರ್ನಾಟಕದ ಪರಿಸರದ ಮತ್ತು ಹೆಚ್ಚಿನವರ ನುಡಿಯಾದ ಕನ್ನಡವನ್ನು ಕಲಿಸಬೇಕು. ಪರಿಸರ ಭಾಷೆಯು ಕನ್ನಡವಾಗಿದ್ದಾಗ ಸರಿಯಾಗಿತ್ತು. ಈಗ ಇಂಗ್ಲೀಶು ಪರಿಸರ ಭಾಷೆಯಾಗಿ ಹೊರಹೊಮ್ಮುತ್ತಿದೆ. ತಾಯಿಯೊಬ್ಬಳು ತನ್ನ ಮೂರುವರ್ಷದ ಮಗುವಿಗೆ -” ಇದು ರೆಡ್ ಫಿಶ್ ಇದು ಪಿನ್ಕ್ ಪ್ಲೋವರ್ ಇದು ಪಂಪಕಿನ್ ಇದು ಜಾಕ್ ಪ್ರುಟ್ ” ಎಂದು ಮುಂತಾಗಿ ಕಲಿಸುತ್ತಿರುವಾಗ ನೋವಿನಿಂದ ಬಳಲುಬಾಗ “ಅಯ್ಯಯ್ಯೋ ಅಮ್ಮಯ್ಯೋ”ಎಂದು ನರಳುವದರ ಬದಲು “ಊ ಅ ಔಚ್” shit ಎಂದು ನುಲಿಯುವ ಜನರಿರುವ ಈ ಸಂದರ್ಭದಲ್ಲಿ ಪರಿಸರ ಭಾಷೆ ಯಾವುದು ಎಂಬುದನ್ನು ತಾವು ನಿರ್ಧರಿಸಬಹುದು. ಎರಡು ಎಳೆಮಕ್ಕಳು ಆಡುತ್ತಿದ್ದರು. ಒಬ್ಬರಿಗೆ ಹೆಚ್ಚು ಅಂದ್ರೆ ನಾಲ್ಕುವರ್ಷ ಇರಬಹುದು ಇನ್ನೊಬ್ಬಳಿಗೆ ಐದುವರ್ಷದಾಟಿಲ್ಲ. ಇಬ್ಬರೂ ಸ್ಪುಟವಾದ ಸ್ವಚ್ಚವಾದ ತೊದಲದ ಇಂಗ್ಲೀಷ ಭಾಷೆಯನ್ನು ಹರಟುತ್ತಿದ್ದರು! ನಾಳೆ, ಅವರು ಕನ್ನಡಿಗರ ಅನ್ನವನ್ನು ಕದಿಯುವುದಿಲ್ಲ ಎನ್ನುವುದನ್ನು ನಂಬುವುದು ಹೇಗೆ?
ಕರ್ನಾಟಕದಲ್ಲಿ ಕನ್ನಡ ಪರಿಸರ ನುಡಿಯೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಮಾತು ಹೆಚ್ಚುಕಾಲ ಇರುವುದಿಲ್ಲ ಎಂಬುದೇ ನನ್ನ ವ್ಯಥೆಯಾಗಿದೆ. ನೀವು ಹೇಳಿದಹಾಗೆ ಇಂದಿಗೂ ತರಕಾರಿಮಾರುವವರು ಪೊಲೀಸರು ಕನ್ನಡದಲ್ಲಿಯೇ ಮಾತನಾಡುತ್ತಾರೆ. ಸರಕಾರೀ ಕಚ್ಹೆರಿಗಳಲ್ಲೂ ಕನ್ನಡವೇ ಇದೆ. ಆದರೆ ಈ ವರ್ಗ ದವರೆಲ್ಲರೂ ಆರ್ಥಿಕವಾಗಿ ಕೆಳವರ್ಗದವರು. ಮುಂದೆ ಇವರು ಸಾಮಾಜಿಕವಾಗಿ ಕೆಳವರ್ಗಕ್ಕೆ ದೂಡಲ್ಪಡುತ್ತಾರೆ. ಇಡೀ ಜೀವಮಾನದಲ್ಲಿ ಒಂದು ನೌಕರಿಹಿಡಿದು ತುದಿಗೊಂದು ಒದ್ದಾಡಿ ಒದ್ದಾಡಿ ಮನೆಯನ್ನು ಕಟ್ಟಿಕೊಳ್ಳಲು ಹೆಣಗುವವರು ಇವರೆಲ್ಲರೂ. ಇಂಗ್ಲಿಶ್ ಕಲಿತ ಇವನ ವಯಸ್ಸಿನವರು ವರುಷಕ್ಕೊಂದು ನೌಕರಿ ಹಿಡಿಯುತ್ತಾರೆ.ಮೊದಲನೆಯ ವರ್ಷದಲ್ಲಿಯೇ ಒಂದು ಅರಮನೆ ಕಟ್ಟುತ್ತಾರೆ. ಸಮಾಜದ ಇಂತಹ ವಿಭಜನೆಯನ್ನು ತಡೆಯಬೇಕು ಎಂಬುದೇ ನನ್ನ ಕಳಕಳಿ.
ಮಾನ್ಯ ಈಶ್ವರ ಶಾಸ್ತ್ರಿಯವರೆ,
ಇಂದಿಗೂ ಕನ್ನಡದ ಪರಿಸರ ನುಡಿಯೇ ಯಾಕಂದರೆ ಇಂದಿಗೂ ೨೦೧೧ರ ಸೆನ್ಸಸ್ (http://censusindia.gov.in) ಪ್ರಕಾರ ಕರ್ನಾಟಕದಲ್ಲಿ ಕನ್ನಡವನ್ನಾಡುವ ಇಲ್ಲವೆ ಕನ್ನಡವನ್ನು ತಾಯ್ನುಡಿಯಾಗಿರುವವರೇ ಬಹುಸಂಖ್ಯಾತರು. ನೀವು ಅಲ್ಲೂಂದು ಇಲ್ಲೊಂದು ಉದಾಹರಣೆಗಳನ್ನು ಇಲ್ಲವೆ ಬರೀ ಬೆಂಗಳೂರನ್ನು ಗಮನದಲ್ಲಿಟ್ಟಿಕೊಂಡು ಮಾತಾಡಿರುತ್ತಿರುವರೆಂದು ನನ್ನ ಭಾವನೆ. ಬೆಂಗಳೂರಿನಲ್ಲೇ ಇರುವ ತರಕಾರಿ ಮಾರುವವರು, ಆಟೊ ಓಡಿಸುವವರು ಅಲ್ಲದೆ ಪೊಲೀಸರು ಇವರೆಲ್ಲ ದಿನಾಲು ಕನ್ನಡದಲ್ಲೇ ಮಾತಾಡೋದು. ಇಂದಿಗೂ ಕರ್ನಾಟಕವೆಂಬ ರಾಜ್ಯವಿರುವುದು ’ಕನ್ನಡ’ ಆಡುವ ಜನರ ರಾಜ್ಯ ಎಂಬ ಮಾನ್ಯತೆಯಿಂದಲೆ (ಭಾಷಾಧಾರಿತ ರಾಜ್ಯ ವಿಂಗಡಣೆ ಆದಾಗಿನಿಂದ). ಕನ್ನಡ ಗೊತ್ತಿಲ್ಲದಿದ್ದರೆ ಕರ್ನಾಟದಲ್ಲಿ ಬಾಳುವುದು ಇಂದಿಗೂ ಕಶ್ಟ. ಹಾಗಾಗಿ ಕನ್ನಡವೇ ಕರ್ನಾಟಕದ ಪರಿಸರದ ನುಡಿ ಅಂತ ಧಾರಾಳವಾಗಿ ಹೇಳಬಹುದು.
ನಲ್ಮೆ,
ಭರತ್.
ಭರತಕುಮಾರರೇ,
ತಮ್ಮ ಅನಿಸಿಕೆ. ಇವುಗಳ ಜೊತೆ ಕರ್ನಾಟಕದ ಪರಿಸರದ ಮತ್ತು ಹೆಚ್ಚಿನವರ ನುಡಿಯಾದ ಕನ್ನಡವನ್ನು ಕಲಿಸಬೇಕು. ಪರಿಸರ ಭಾಷೆಯು ಕನ್ನಡವಾಗಿದ್ದಾಗ ಸರಿಯಾಗಿತ್ತು. ಈಗ ಇಂಗ್ಲೀಶು ಪರಿಸರ ಭಾಷೆಯಾಗಿ ಹೊರಹೊಮ್ಮುತ್ತಿದೆ. ತಾಯಿಯೊಬ್ಬಳು ತನ್ನ ಮೂರುವರ್ಷದ ಮಗುವಿಗೆ -” ಇದು ರೆಡ್ ಫಿಶ್ ಇದು ಪಿನ್ಕ್ ಪ್ಲೋವರ್ ಇದು ಪಂಪಕಿನ್ ಇದು ಜಾಕ್ ಪ್ರುಟ್ ” ಎಂದು ಮುಂತಾಗಿ ಕಲಿಸುತ್ತಿರುವಾಗ್ ನೋವಿನಿಂದ ಬಳಲುಬಾಗ “ಅಯ್ಯಯ್ಯೋ ಅಮ್ಮಯ್ಯೋ”ಎಂದು ನರಳುವದರ ಬದಲು “ಊ ಅ ಔಚ್” shit ಎಂದು ನುಲಿಯುವ ಜನರಿರುವ ಈ ಸಂದರ್ಭದಲ್ಲಿ ಪರಿಸರ ಭಾಷೆ ಯಾವುದು ಎಂಬುದನ್ನು ತಾವು ನಿರ್ಧರಿಸಬಹುದು.
ಈಶ್ವರ ಶಾಸ್ತ್ರಿ
ಮಾನ್ಯರೆ,
ನಮಸ್ಕಾರ. ತಮ್ಮ ಪತ್ರ ನೋಡಿದೆ. ಇದೊಂದು ಸಂಪೂರ್ಣ ಭ್ರಮೆಗೊಳಗಾಗಿ ಮೂಡಿಬಂದಿರುವ ಚಿಂತನೆ. ತರಕಾರಿ ಮಾರುವವಳಿಗೆ ಪಂಪ್ ಕಿನ್ ಇತ್ಯಾದಿಗಳನ್ನು ಹೇಳಿಕೊಟ್ಟವರು ಕನ್ನಡದಲ್ಲಿ ಮಾತನಾಡುವುದು ಏನೋ ಅವಮಾನ ಎಂದುಕೊಳ್ಳುವ ಮೂರ್ಖರು. ವಿದ್ಯಾವಂತರಿಗೇ ಈ ಭ್ರಮೆ ಇರುವಾಗ ಯಾರೋ ಹೊಟಲ್ ಮಾಣಿ, ತರಕಾರಿ ಮಾರುವವ ಇಂಗ್ಲಿಷ್ ಪದ ಉಚ್ಚರಿಸಿಬಿಟ್ಟರೆ, ಇಂಗ್ಲಿಷ್ ಪರಿಸರದ ಭಾಷೆಯಾಗಿಬಿಟ್ಟಿದೆ ಎಂದು ಭ್ರಮಿಸಬಾರದು!
ನಿಜ, ತರಕಾರಿ ಮಾರುವವರೂ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳಿಸುತ್ತಿದ್ದಾರೆ. ಆದರೆ,
ಅವರ ಇಂಗ್ಲಿಷ್ ಮಟ್ಟ ಎಂತಹದ್ದು? ವಸ್ತುಸ್ಥಿತಿ ಎಂದರೆ, ನಮ್ಮ ಬಹುಪಾಲು ಈ ಪೀಳಿಗೆಯ
ಮಕ್ಕಳಿಗೆ ಕನ್ನಡವೂ ಬಾರದು, ಅವರ ಇಂಗ್ಲಿಷ್ ಕೀಳು ಮಟ್ಟದ್ದು. ಅಥೋಭ್ರಷ್ಟ ತಥೋ
ಭ್ರಷ್ಟ ಎಂಬಂತೆ. ಇವರುಗಳ ಭಾಷಿಕ ಸಾಮರ್ಥ್ಯ ಏನು?
ಇನ್ನು ಇಂಗ್ಲಿಷ್ ಶಾಲೆಗಳಲ್ಲಿ ಓದಿದವರಿಗೆಲ್ಲಾ ಲಕ್ಷ ಲಕ್ಷ ಸಂಬಳ ಬರುವುದಿಲ್ಲ!
ಇಂತಹುದನ್ನೆಲ್ಲ ಬಿಟ್ಟು, ಮನಃಶಾಸ್ತ್ರೀಯವಾಗಿ, ವೈಜ್ಞಾನಿಕ ಪದ್ಧತಿಯಲ್ಲಿ ಮಕ್ಕಳಿಗೆ
ಶಿಕ್ಷಣ ಕೊಡಬೆಕಾದ ಹೊಣೆ ಇಂದಿನ ಸಮಾಜದ ಮೇಲಿದೆ.
ಆದರಗಳೊಂದಿಗೆ
ಕೆ ಎಸ್ ನವೀನ್